ಸೋಮವಾರ, ಮಾರ್ಚ್ 21, 2022

ವಿಶ್ವ ಅರಣ್ಯ ದಿನ

ವಿಶ್ವ ಅರಣ್ಯ ದಿನ 


 ಪ್ರತಿ ವರ್ಷ ಮಾರ್ಚ್ 21ರಂದು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಚರಿಸಲಾಗುವ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ. 
ವಿಶ್ವ ಅರಣ್ಯ ದಿನ ಏಕೆ ? 
1971ರ ನವಂಬರ್ ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಯಿತು.
 ಕುಡಿಯುವ ನೀರಿನಿಂದ ಹಿಡಿದು, ಬರೆಯುವ ಪುಸ್ತಕ, ಕಟ್ಟುವ ಮನೆಯವರಿಗೂ ಎಲ್ಲದರಲ್ಲೂ ಅರಣ್ಯದ ಪಾತ್ರವಿದೆ. ಇವುಗಳ ನಿರ್ಮಾಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾಡಿನ ಸಂಪನ್ಮೂಲಗಳ ಬಳಕೆಯಾಗುತ್ತಿದೆ.ಮಳೆ ,ಹವಾಮಾನ ಏರು-ಪೇರು,  ಪರಿಸರ ವ್ಯವಸ್ಥೆಗಳಲ್ಲಿ ಅರಣ್ಯದ ಪಾತ್ರ ಮಹತ್ವದ್ದು . ಬಡತನ ನಿರ್ಮೂಲನೆಗೆ ಅರಣ್ಯದ ಕೊಡುಗೆ ಅಪಾರ. ಈ ಕುರಿತು ಜಾಗೃತಿ ಮೂಡಿಸಲು ಈ ದಿನಾಚರಣೆ ನಡೆಸಲಾಗುತ್ತಿದೆ.
ಅರಣ್ಯಕ್ಕಿರುವ ಮಹತ್ವವೇನು ?
* ಅರಣ್ಯಗಳು ಮಳೆ ಬೀಳಲು ಸಹಾಯಕವಾಗಿವೆ.
*ಮಣ್ಣಿನ ಸವೆತ ವನ್ನು ತಡೆಗಟ್ಟಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ.
*ಅರಣ್ಯಗಳು ಸುತ್ತಲಿನ ಪರಿಸರದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ.
*ಕಾಲಾಂತರದಲ್ಲಿ ಕಲ್ಲಿದ್ದಲು ಕಲ್ಲೆಣ್ಣೆಗಳಂತಹ ಇಂಧನಗಳಾಗಿ ಮಾರ್ಪಾಟಾಗುತ್ತವೆ.
*ಅರಣ್ಯ ಸಸ್ಯಗಳು ಔಷಧೀಯ ಸಸ್ಯಗಳಾಗಿ ಬಳಕೆಯಾಗುತ್ತವೆ.
*ಕಾಗದ ,ಗಂಧದ ಎಣ್ಣೆ , ಅರಗು, ಕರ್ಪೂರದಂತಹ ದ್ರವ್ಯ, ಬಿದಿರು, ಮರಮುಟ್ಟು, ಸಾಂಬಾರ್ ಪದಾರ್ಥಗಳು ಅನೇಕ ಅವಶ್ಯ ವಸ್ತುಗಳನ್ನು ಅರಣ್ಯದಲ್ಲಿರುವ ಸಸ್ಯಗಳಿಂದ ಉತ್ಪಾದಿಸಲಾಗುತ್ತದೆ.
*ಚರ್ಮ ದಂತ ಮಾಂಸ ಮೊದಲಾದ ವಸ್ತುಗಳು ಅರಣ್ಯವಾಸಿಗಳಾದ ಪ್ರಾಣಿಗಳಿಂದ ದೊರಕುತ್ತವೆ.
 
ಒಟ್ಟಿನಲ್ಲಿ ಈ ಎಲ್ಲ ಕಾರಣಗಳಿಂದಾಗಿ ನಮ್ಮ ಮುಂದಿನ ಪೀಳಿಗೆಗೆ ಅರಣ್ಯವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಈ ವರ್ಷದ ಥೀಮ್ ಏನು ?
ಸರ್ಕಾರ ಅರಣ್ಯ ಎಂದು ಕಾಯ್ದಿರಿಸಿರುವ ಪ್ರದೇಶಗಳ ರಕ್ಷಣೆಗಾಗಿ ಅರಣ್ಯ ಕಾಯ್ದೆ ರೂಪಿಸಲಾಗಿದೆ. ಅರಣ್ಯಕ್ಕೆ ಸೇರಿದ ಭೂಮಿಯ ಒಡೆತನ ಯಾರದ್ದಾಗಿದ್ದರೂ ಕಾಯ್ದೆಗಳಿಗೆ ಸರ್ವ ವ್ಯಾಪ್ತಿಯಿದ್ದೇ ಇದೆ. ಅರಣ್ಯ ರಾಷ್ಟ್ರದ ಸಂಪತ್ತಾಗಿದೆ. ಈ ಅರಣ್ಯವನ್ನು ಕಾಪಾಡುವ ಉದ್ದೇಶದಿಂದ "forests and sustainable production and consumption" (ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ ) ಎಂಬ ಥೀಮ್  ಇಟ್ಟುಕೊಂಡು ದಿನಾಚರಣೆ ನಡೆಸಲಾಗುತ್ತಿದೆ.