ಕಪ್ಪು ಶಿಲೀಂಧ್ರ

  


ಕಪ್ಪು ಶಿಲೀಂಧ್ರ
ಕಪ್ಪು ಶಿಲೀಂಧ್ರ (ಬ್ಲಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ) ಎನ್ನುವುದು ಶಿಲೀಂಧ್ರಗಳಿಂದ ಉಂಟಾಗುವ ಅತ್ಯಂತ ಅಪರೂಪದ ಸೋಂಕು. ಈ ಶಿಲೀಂಧ್ರ ಹೆಚ್ಚಾಗಿ ಮಣ್ಣು, ಕೊಳೆತ ಎಲೆ, ತರಕಾರಿ, ಪ್ರಾಣಿಗಳ ಮಲದಲ್ಲಿ ಇರುತ್ತದೆ. ಇದು ದೇಹವನ್ನು ನಾವು ತೆಗೆದುಕೊಳ್ಳುವ ಉಸಿರಿನ ಮೂಲಕ, ತಿನ್ನುವ ಆಹಾರದ ಮೂಲಕ, ಮತ್ತು ಮೈ ಮೇಲಿನ ಗಾಯಗಳ ಮೂಲಕ ಹರಡಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮನುಷ್ಯರ ದೇಹದೊಳಗೆ ಹೊಕ್ಕು, ರಕ್ತನಾಳಗಳಿಗಂಟಿಕೊಂಡು ಆ ನಾಳದಲ್ಲಿ ರಕ್ತ ಹೆಪ್ಪುಗಟ್ಟಿಸಿ ಅದರಿಂದ ದೇಹದ ಭಾಗಗಳಿಗೆ ಹರಿಯುವ ರಕ್ತ ಕಮ್ಮಿಯಾಗಿ ಆ ಭಾಗಗಳು ಕೊಳೆಯುತ್ತಾ ಬರುತ್ತದೆ. ಇದು ಹೆಚ್ಚಾಗಿ ಕಾಣಿಸಿಕೊಳ್ಳುವ ಅಂಗಗಳೆಂದರೆ ಮೂಗಿನ ಮೇಲ್ಬಾಗ ಮತ್ತು ಅಲ್ಲಿಂದ ಮೆದುಳು, ಶ್ವಾಸಕೋಶ, ಕಣ್ಣು, ಹೊಟ್ಟೆ/ಕರುಳು, ಚರ್ಮದ ಮೇಲಿನ ಗಾಯ ಮತ್ತು ರಕ್ತದಿಂದ ಸಾಗಿ ದೇಹದ ಯಾವುದೇ ಭಾಗಕ್ಕೂ ಕೂಡ ಹರಡುತ್ತದೆ.
ಮ್ಯೂಕರ್ ಮೈಕೋಸಿಸ್
ಲಕ್ಷಣಗಳು:
ಮೂಗುಗಟ್ಟುವಿಕೆ, ಮೂಗಿನಿಂದ ರಕ್ತ, ಮೂಗಿನ ಮತ್ತು ಕೆನ್ನೆಗಳ ನಡುವಿನ ಭಾಗದಲ್ಲಿ ನೋವು,ಸೀನಿದಾಗ ಸಿಂಬಳದಲ್ಲಿ ಕರಿಯ ಬಣ್ಣ ಕಾಣಿಸು ಕೊಳ್ಳುವುದು, ಕಣ್ಣುರಿತ, ಕಣ್ಣು ಮುಂದಕ್ಕೆ ಬಂದಂತೆ ಕಾಣುವಿಕೆ, ಕಣ್ಣಿನ ಚಲನೆಯ ಸ್ಥಗಿತ, ಜ್ವರ, ಉಸಿರಾಟದ ತೊಂದರೆ, ರಕ್ತ ವಾಂತಿ, ಮಾನಸಿಕವಾಗಿ ಅನಾರೋಗ್ಯಕರ ಮತ್ತು ಗೊಂದಲಮಯ ಪರಿಸ್ಥಿತಿಗಳು ಇದರ ಮುಖ್ಯ ಲಕ್ಷಣಗಳು. ಈ ರೋಗವು ಅನೇಕ ವೇಳೆ ರಕ್ತ ನಾಳಗಳ ಸುತ್ತ ಬೆಳೆಯುವ ಶಿಲೀಂದ್ರಗಳ ಶಾಖೆಗಳ ಮೂಲಕ ಕಾಣಿಸಿಕೊಳ್ಳುತ್ತವೆ. ಮಧುಮೇಹ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಜೀವಕ್ಕೆ ಅಪಾಯಕಾರಿಯಾಗಬಹುದು.


ಮ್ಯೂಕರ್ ಮೈಕೋಸಿಸ್' ಸೋಂಕಿಗೆ ಒಳಗಾಗಿರುವ ರೋಗಿಯ ಕಣ್ಣಿನ ಚಿತ್ರ  
ಚಿಕಿತ್ಸೆ
ಕಪ್ಪು ಶೀಲೀಂಧ್ರ ಸೋಂಕಿನ ಶಂಕೆ ಇದ್ದಲ್ಲಿ, ರೋಗದ ತ್ವರಿತ ಹರಡುವಿಕೆ ಮತ್ತು ಹೆಚ್ಚಿನ ಮರಣವನ್ನು ತಡೆಯಲು ಆಂಫೊಟೆರಿಸಿನ್ ಬಿ ಚಿಕಿತ್ಸೆಯನ್ನು ತಕ್ಷಣವೇ ನೀಡಬೇಕು . ಸೋಂಕಿನ ನಿರ್ಮೂಲನೆಗಾಗಿ ಆಂಫೊಟೆರಿಸಿನ್ ಬಿ ಅನ್ನು ಸೋಂಕು ಖಚಿತಪಟ್ಟ ೪-೬ ವಾರಗಳವರೆಗೆ ನೀಡಲಾಗುತ್ತದೆ. ತೀವ್ರವಾದ ಆಸ್ಪರ್ಜಿಲೊಸಿಸ್ ಮತ್ತು ಕಪ್ಪು ಶೀಲೀಂಧ್ರ ಸೋಂಕಿನ ಚಿಕಿತ್ಸೆಗೆ ಇಸಾವುಕೊನಜೋಲ್ ಅನ್ನು ಬಳಸಲು ಇತ್ತೀಚೆಗೆ ಎಫ್.ಡಿ.ಎ.ಯು ಅನುಮೋದಿಸಿತು
ಶಸ್ತ್ರಚಿಕಿತ್ಸೆಯ ಚಿಕಿತ್ಸೆಯ ಮೂಲಕ ಮೂಗಿನ ಕುಹರ ಮತ್ತು ಮೆದುಳನ್ನು ಒಳಗೊಂಡ ಕೆಲವು ಸಂದರ್ಭಗಳಲ್ಲಿ, ಸೋಂಕಿತ ಮಿದುಳಿನ ಅಂಗಾಂಶವನ್ನು ತೆಗೆದುಹಾಕುವ ಅಗತ್ಯವಿರುತ್ತದೆ
ಹೈಪರ್ಬಾರಿಕ್ ಆಮ್ಲಜನಕವು ಈ ಚಿಕಿತ್ಸೆಗೆ ಪ್ರಯೋಜನಕಾರಿಯಾಗಬಹುದು ಎಂದು ಊಹಿಸಲಾಗಿದೆ ಏಕೆಂದರೆ ಹೆಚ್ಚಿನ ಆಮ್ಲಜನಕದ ಒತ್ತಡವು ಶಿಲೀಂಧ್ರವನ್ನು ಕೊಲ್ಲುವ ನಮ್ಮ ರಕ್ತದಲ್ಲಿಯೇ ಬಿಳಿ ರಕ್ತ ಕಣದ ಘಟಕ ವಾಗಿರುವ  ನ್ಯೂಟ್ರೋಫಿಲ್ಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ