ಅಧ್ಯಾಯ 1 : ನಮ್ಮ ಸುತ್ತಮುತ್ತಲಿನ ದ್ರವ್ಯಗಳು
ಎಲ್ಲಾ 60 ಪ್ರಶ್ನೆಗಳು ಮತ್ತು ಮಾದರಿ ಉತ್ತರಗಳು (1, 2, 3 ಮತ್ತು 4 ಅಂಕಗಳು)
I. ಬಹು ಆಯ್ಕೆ ಪ್ರಶ್ನೆಗಳು (1 ಅಂಕ)
1. ದ್ರವ್ಯದ ಕಣಗಳ ನಡುವೆ ಇರುವ ಆಕರ್ಷಣಾ ಬಲವು ಕೆಳಗಿನ ಈ ಸ್ಥಿತಿಯಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ:
ಉತ್ತರ: C. ಘನ ಸ್ಥಿತಿ
2. ನೀರಿನಲ್ಲಿ ಪೊಟ್ಯಾಷಿಯಂ ಪರ್ಮಾಂಗನೇಟ್ ಹರಳುಗಳನ್ನು ಹಾಕಿದಾಗ ನೀರು ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದು ದ್ರವ್ಯದ ಈ ಗುಣವನ್ನು ಪ್ರದರ್ಶಿಸುತ್ತದೆ:
ಉತ್ತರ: B. ಕಣಗಳು ನಿರಂತರ ಚಲನೆಯಲ್ಲಿ ಇರುತ್ತವೆ
3. ಈ ಕೆಳಗಿನವುಗಳಲ್ಲಿ ಇದು ದ್ರವ್ಯದ ವಿಶಿಷ್ಟ ಲಕ್ಷಣವಲ್ಲ:
ಉತ್ತರ: C. ಬಣ್ಣ
4. ಅನಿಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲು ಸಾಧ್ಯವಾಗುವ ಅನಿಲದ ಗುಣ:
ಉತ್ತರ: B. ಹೆಚ್ಚು ಸಂಪೀಡನೆ ಹೊಂದುವ ಸಾಮರ್ಥ್ಯ
5. ಅಮೋನಿಯಂ ಕ್ಲೋರೈಡ್ ಅನ್ನು ಪಿಂಗಾಣಿ ಪಾತ್ರೆಯಲ್ಲಿ ಕಾಸಿದಾಗ, ಅಮೋನಿಯಂ ಕ್ಲೋರೈಡ್ ಘನಸ್ಥಿತಿಯಿಂದ ನೇರವಾಗಿ ಅನಿಲಸ್ಥಿತಿಗೆ ಬದಲಾವಣೆಯಾಗುವ ಕ್ರಿಯೆ:
ಉತ್ತರ: C. ಉತ್ಪತನ
6. ತಾಪ ಹೆಚ್ಚಿದಂತೆ ದ್ರವ್ಯದ ಕಣಗಳ ಚಲನ ಶಕ್ತಿ:
ಉತ್ತರ: D. ಹೆಚ್ಚಾಗುತ್ತದೆ
7. ಈ ಕೆಳಗಿನ ಈ ವಸ್ತುವು ಉತ್ಪತನದ ಗುಣವನ್ನು ತೋರಿಸುವುದಿಲ್ಲ:
ಉತ್ತರ: D. ತಾಮ್ರ
8. ಒಂದು ದ್ರವವು ಅದರ ಕುದಿಯುವ ಬಿಂದುಗಿಂತ ಕಡಿಮೆ ತಾಪದಲ್ಲಿ ಅನಿಲವಾಗಿ ಬದಲಾಗುವ ಪ್ರಕ್ರಿಯೆ:
ಉತ್ತರ: B. ಬಾಷ್ಟ್ರೀಕರಣ
9. ಶುಷ್ಕ ಮಂಜುಗಡ್ಡೆ (Dry Ice) ಎಂದು ಕರೆಯಲ್ಪಡುವುದು:
ಉತ್ತರ: B. ಘನ ಕಾರ್ಬನ್ ಡೈ ಆಕ್ಸೈಡ್
10. ಒತ್ತಡದ SI ಏಕಮಾನ:
ಉತ್ತರ: A. ಪ್ಯಾಸ್ಕಲ್ (Pa)
II. ಒಂದು ಅಂಕದ ಪ್ರಶ್ನೋತ್ತರಗಳು
11. ದ್ರವ್ಯ ಎಂದರೇನು?
ಉತ್ತರ: ಸ್ಥಳವನ್ನು ಆಕ್ರಮಿಸುವ ಮತ್ತು ದ್ರವ್ಯರಾಶಿ ಹೊಂದಿರುವ ವಸ್ತುವನ್ನು ದ್ರವ್ಯ ಎನ್ನುವರು.
12. ದ್ರವ್ಯದ ಮೂರು ಸ್ಥಿತಿಗಳು ಯಾವುವು?
ಉತ್ತರ: ಘನ, ದ್ರವ ಮತ್ತು ಅನಿಲ.
13. "ತಾಪ ಹೆಚ್ಚಿದಂತೆ ಕಣಗಳ ಚಲನಶಕ್ತಿ ಹೆಚ್ಚಾಗುತ್ತದೆ". ಈ ಹೇಳಿಕೆಯನ್ನು ಸಮರ್ಥಿಸಿ.
ಉತ್ತರ: ದ್ರವ್ಯದ ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ. ತಾಪ ಹೆಚ್ಚಿದಂತೆ ಕಣಗಳು ವೇಗವಾಗಿ ಚಲಿಸುತ್ತವೆ. ಆದ್ದರಿಂದ ತಾಪ ಹೆಚ್ಚಿದಂತೆ ಕಣಗಳ ಚಲನಶಕ್ತಿ ಕೂಡ ಹೆಚ್ಚಾಗುತ್ತದೆ.
14. ನಿಮಗೆ ಬಹಳ ದೂರದಿಂದಲೇ ಬಿಸಿ ಆಹಾರದ ವಾಸನೆ ತಿಳಿಯುತ್ತದೆ. ಆದರೆ, ತಂಪಾದ ಆಹಾರದ ವಾಸನೆಯನ್ನು ತಿಳಿಯಲು ನೀವು ಆಹಾರದ ಹತ್ತಿರ ಹೋಗಬೇಕು. ಈ ಹೇಳಿಕೆಯನ್ನು ಪುಷ್ಟಿಕರಿಸಿ.
ಉತ್ತರ: ಬಿಸಿ ಆಹಾರದ ಕಣಗಳು ವೇಗವಾಗಿ ಚಲಿಸುತ್ತವೆ, ಹೆಚ್ಚು ಚಲನಶಕ್ತಿ ಹೊಂದಿವೆ. ಆದ್ದರಿಂದ ದೂರದಿಂದಲೇ ಬಿಸಿ ಆಹಾರದ ವಾಸನೆ ತಿಳಿಯುತ್ತದೆ. ತಂಪಾದ ಆಹಾರದ ಕಣಗಳು ಕಡಿಮೆ ಚಲನಶಕ್ತಿ ಹೊಂದಿರುತ್ತವೆ. ಆದ್ದರಿಂದ ತಂಪಾದ ಆಹಾರದ ವಾಸನೆಯನ್ನು ತಿಳಿಯಲು ಆಹಾರದ ಹತ್ತಿರ ಹೋಗಬೇಕು.
15. ಕೊಠಡಿಯ ಉಷ್ಣತೆಯಲ್ಲಿ ನೀರು ದ್ರವವಾಗಿರುತ್ತದೆ. ಎರಡು ಕಾರಣಗಳೊಂದಿಗೆ ಸಮರ್ಥಿಸಿ.
ಉತ್ತರ: ನೀರಿಗೆ ನಿರ್ದಿಷ್ಟ ಆಕಾರ ಇಲ್ಲ. ನೀರು ಹರಿಯುವ ಮತ್ತು ಆಕಾರವನ್ನು ಬದಲಿಸಿಕೊಳ್ಳುವ ಗುಣ ಹೊಂದಿದೆ.
16. ಕಬ್ಬಿಣದ ಬೀರು ಕೊಠಡಿಯ ಉಷ್ಣತೆಯಲ್ಲಿ ಘನರೂಪದಲ್ಲಿರುತ್ತದೆ. ಎರಡು ಕಾರಣಗಳೊಂದಿಗೆ ಸಮರ್ಥಿಸಿ.
ಉತ್ತರ: ಕಬ್ಬಿಣದ ಬೀರು ನಿರ್ದಿಷ್ಟ ಆಕಾರ, ಸುತ್ತಳತೆ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿದೆ. ಕಣಗಳು ಒತ್ತೊತ್ತಾಗಿ ಜೋಡಣೆ ಆಗಿದ್ದು, ಸಂಪೀಡನೆ ನಗಣ್ಯವಾಗಿದೆ.
17. ದ್ರವನ ಬಿಂದು ಎಂದರೇನು?
ಉತ್ತರ: ಘನ ವಸ್ತುಗಳು ದ್ರವಿಸಿ, ವಾತಾವರಣದ ಒತ್ತಡದಲ್ಲಿ ದ್ರವಸ್ಥಿತಿಗೆ ಪರಿವರ್ತನೆಯಾಗುವ ತಾಪವನ್ನು ದ್ರವನಬಿಂದು ಎನ್ನುವರು.
18. ಮಂಜುಗಡ್ಡೆಯ ದ್ರವನ ಬಿಂದು ತಿಳಿಸಿ.
ಉತ್ತರ: ಮಂಜುಗಡ್ಡೆಯ ದ್ರವನ ಬಿಂದು 273.16 K ಅಥವಾ 0° C.
19. ತಾಪದ ಅಂತಾರಾಷ್ಟ್ರೀಯ ಏಕಮಾನವನ್ನು ತಿಳಿಸಿ.
ಉತ್ತರ: ತಾಪದ ಅಂತಾರಾಷ್ಟ್ರೀಯ ಏಕಮಾನ ಕೆಲ್ವಿನ್ (K).
20. ಗುಪ್ತೋಷ್ಣ ಎಂದರೇನು?
ಉತ್ತರ: ದ್ರವ್ಯಗಳಿಗೆ ಶಾಖವನ್ನು ಕೊಟ್ಟಾಗ, ಶಾಖವನ್ನು ಹೀರಿಕೊಂಡು ದ್ರವ್ಯದ ತಾಪದಲ್ಲಿ ಯಾವುದೇ ಬದಲಾವಣೆ ಹೊಂದದೆ ಉಷ್ಣವನ್ನು ಗುಪ್ತವಾಗಿರಿಸಿಕೊಳ್ಳುವ ಕ್ರಿಯೆಯನ್ನು ಗುಪ್ತೋಷ್ಣ ಎನ್ನುವರು.
21. ದ್ರವನ ಗುಪ್ತೋಷ್ಣ ಎಂದರೇನು?
ಉತ್ತರ: 1 Kg ಘನ ವಸ್ತುವನ್ನು ಅದರ ದ್ರವನ ಬಿಂದುವಿನಲ್ಲಿ, ವಾತಾವರಣದ ಒತ್ತಡದಲ್ಲಿ ದ್ರವವಾಗಿ ಪರಿವರ್ತಿಸಲು ಬೇಕಾಗುವ ಉಷ್ಣಶಕ್ತಿಯ ಪರಿಮಾಣವನ್ನು ದ್ರವನ ಗುಪ್ತೋಷ್ಣ ಎನ್ನುವರು.
22. ಕುದಿಯುವ ಬಿಂದು ಎಂದರೇನು?
ಉತ್ತರ: ವಾತಾವರಣದ ಒತ್ತಡದಲ್ಲಿ ದ್ರವವು ಕುದಿಯಲು ಪ್ರಾರಂಭವಾಗುವ ನಿರ್ದಿಷ್ಟ ತಾಪವನ್ನು ಕುದಿಯುವ ಬಿಂದು ಎನ್ನುವರು.
23. ನೀರಿನ ಕುದಿಯುವ ಬಿಂದು ತಿಳಿಸಿ.
ಉತ್ತರ: 100°C (373K).
24. ಆವೀಕರಣ ಗುಪ್ತೋಷ್ಣ ಎಂದರೇನು?
ಉತ್ತರ: 1 Kg ದ್ರವವನ್ನು ಅದರ ಕುದಿಯುವ ಬಿಂದುವಿನಲ್ಲಿ, ವಾತಾವರಣದ ಒತ್ತಡದಲ್ಲಿ ಅನಿಲವಾಗಿ ಪರಿವರ್ತಿಸಲು ಬೇಕಾಗುವ ಉಷ್ಣಶಕ್ತಿಯ ಪರಿಮಾಣವನ್ನು ಆವೀಕರಣ ಗುಪ್ತೋಷ್ಣ ಎನ್ನುವರು.
25. ಸಮಯ ಕಳೆದಂತೆ ನ್ಯಾಫ್ತಲಿನ್ ಗುಳಿಗೆಗಳು ನಿಶೇಷವಾಗಿ ಮಾಯವಾಗುತ್ತವೆ. ಏಕೆ? ಕಾರಣ ಕೊಡಿ.
ಉತ್ತರ: ನ್ಯಾಫ್ತಲಿನ್ ಗುಳಿಗೆಗಳು ಉತ್ಪತನ ಕ್ರಿಯೆಗೆ ಒಳಗಾಗುತ್ತವೆ. ನ್ಯಾಫ್ತಲಿನ್ ಗುಳಿಗೆಗಳು ದ್ರವಸ್ಥಿತಿಗೆ ಬರದೆ ನೇರವಾಗಿ ಅನಿಲ ಸ್ಥಿತಿಗೆ ಬದಲಾಗುವುದರಿಂದ ಸಮಯ ಕಳೆದಂತೆ ನಿಶೇಷವಾಗಿ ಮಾಯವಾಗುತ್ತವೆ.
26. ಉತ್ಪತನ ಎಂದರೇನು?
ಉತ್ತರ: ಘನ ವಸ್ತುವು ದ್ರವ ಸ್ಥಿತಿಗೆ ಬರದೆ ನೇರವಾಗಿ ಅನಿಲ ಸ್ಥಿತಿಗೆ ಬದಲಾಗುವುದನ್ನು ಉತ್ಪತನ ಎನ್ನುವರು.
27. ಘನ ಕಾರ್ಬನ್ ಡೈ ಆಕ್ಸೈಡ್ ಅನ್ನು ಶುಷ್ಕ ಮಂಜುಗಡ್ಡೆ (Dry Ice) ಎನ್ನುವರು. ಕಾರಣ ಕೊಡಿ.
ಉತ್ತರ: ವಾತಾವರಣದ ಒತ್ತಡವನ್ನು 1 atmಗೆ ಇಳಿಸಿದಾಗ ಘನ ಕಾರ್ಬನ್ ಡೈ ಆಕ್ಸೈಡ್ ದ್ರವ ಸ್ಥಿತಿಗೆ ಬದಲಾಗದೆ ನೇರವಾಗಿ ಅನಿಲ ಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ಘನ ಕಾರ್ಬನ್ ಡೈ ಆಕ್ಸೈಡ್‌ನ್ನು ಶುಷ್ಕ ಮಂಜುಗಡ್ಡೆ ಎನ್ನುವರು.
28. ಬೇಸಿಗೆ ದಿನಗಳಲ್ಲಿ ಮಡಕೆಯಲ್ಲಿನ ನೀರು ತಂಪಾಗುತ್ತದೆ. ಈ ಹೇಳಿಕೆಯನ್ನು ಸಮರ್ಥಿಸಿ.
ಉತ್ತರ: ಮಣ್ಣಿನ ಮಡಕೆಯು ಅಸಂಖ್ಯಾತ ಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ. ಮಡಕೆಯಲ್ಲಿರುವ ನೀರು ಸೂಕ್ಷ್ಮ ರಂಧ್ರಗಳ ಮೂಲಕ ಹೊರಬಂದು ಆವಿಯಾಗಲು ಮಡಕೆಯೊಳಗೆ ಇರುವ ನೀರಿನ ಉಷ್ಣವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಮಡಕೆಯೊಳಗೆ ಇರುವ ನೀರು ತಂಪಾಗುತ್ತದೆ.
29. ನಮ್ಮ ಹಸ್ತದ ಮೇಲೆ ಸ್ವಲ್ಪ ಅಸಿಟೋನ್ ಅಥವಾ ಸುಗಂಧ ದ್ರವ್ಯ ಬಿದ್ದಾಗ ತಂಪಿನ ಅನುಭವವಾಗುತ್ತದೆ. ಈ ಹೇಳಿಕೆಯನ್ನು ಪುಷ್ಟಿಕರಿಸಿ.
ಉತ್ತರ: ಅಸಿಟೋನ್ ಕಣಗಳು ನಮ್ಮ ಹಸ್ತದ ಮೇಲಿರುವ ಉಷ್ಣಶಕ್ತಿಯನ್ನು ಬಳಸಿಕೊಂಡು ಆವಿಯಾಗುತ್ತದೆ. ಹಾಗಾಗಿ, ನಮಗೆ ತಂಪಾದ ಅನುಭವವಾಗುತ್ತದೆ.
30. ಅತ್ಯಂತ ತಣ್ಣಗಿನ ನೀರಿರುವ ಗಾಜಿನ ಪಾತ್ರೆಯ ಹೊರ ಮೇಲ್ಮೈ ಮೇಲೆ ನಾವು ನೀರಿನ ಹನಿಗಳನ್ನು ಕಾಣುತ್ತೇವೆ. ಏಕೆ?
ಉತ್ತರ: ವಾತಾವರಣದಲ್ಲಿನ ನೀರಾವಿಯ ಕಣಗಳು ತಂಪಾದ ನೀರು ಇರುವ ಲೋಟದ ಹತ್ತಿರ ಬಂದಾಗ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಮತ್ತು ದ್ರವಸ್ಥಿತಿಗೆ ಬರುತ್ತವೆ. ಆದ್ದರಿಂದ ಅತ್ಯಂತ ತಣ್ಣಗಿನ ನೀರಿರುವ ಗಾಜಿನ ಪಾತ್ರೆಯ ಹೊರ ಮೇಲ್ಮೈ ಮೇಲೆ ನೀರಿನ ಹನಿಗಳನ್ನು ಕಾಣುತ್ತೇವೆ.
III. ಎರಡು ಅಂಕದ ಪ್ರಶ್ನೋತ್ತರಗಳು
31. ಈ ಕೆಳಗಿನವುಗಳಲ್ಲಿ ಯಾವುವು ದ್ರವ್ಯಗಳಾಗಿವೆ? ಪ್ರತ್ಯೇಕಿಸಿ.
ಕುರ್ಚಿ, ಗಾಳಿ, ಪ್ರೀತಿ, ವಾಸನೆ, ದ್ವೇಷ, ಬಾದಾಮಿಗಳು, ಆಲೋಚನೆ, ತಂಪು, ತಂಪು ಪಾನೀಯ, ಸೌಂದರ್ಯವರ್ಧಕದ ವಾಸನೆ.
ಕುರ್ಚಿ, ಗಾಳಿ, ಪ್ರೀತಿ, ವಾಸನೆ, ದ್ವೇಷ, ಬಾದಾಮಿಗಳು, ಆಲೋಚನೆ, ತಂಪು, ತಂಪು ಪಾನೀಯ, ಸೌಂದರ್ಯವರ್ಧಕದ ವಾಸನೆ.
ಉತ್ತರ: ದ್ರವ್ಯಗಳು - ಕುರ್ಚಿ, ಗಾಳಿ, ಬಾದಾಮಿಗಳು, ತಂಪು ಪಾನೀಯ, ಸೌಂದರ್ಯವರ್ಧಕದ ವಾಸನೆ.
32. ದ್ರವ್ಯದ ಕಣಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡಿ.
ಉತ್ತರ:
1. ದ್ರವ್ಯವು ಚಿಕ್ಕ ಕಣಗಳಿಂದ ಮಾಡಲ್ಪಟ್ಟಿದೆ.
2. ದ್ರವ್ಯದ ಕಣಗಳ ಮಧ್ಯೆ ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತವೆ.
3. ದ್ರವ್ಯದ ಕಣಗಳು ನಿರಂತರವಾಗಿ ಚಲನೆಯಲ್ಲಿರುತ್ತವೆ.
4. ತಾಪ ಹೆಚ್ಚಾದಂತೆ ದ್ರವ್ಯದ ಕಣಗಳ ಚಲನ ಶಕ್ತಿಯೂ ಹೆಚ್ಚಾಗುತ್ತದೆ.
5. ದ್ರವ್ಯದ ಕಣಗಳು ಪರಸ್ಪರ ಆಕರ್ಷಿಸುತ್ತವೆ.

33. ನಾವು ಹಲವಾರು ಮೀಟರ್ ದೂರದಲ್ಲಿ ಕುಳಿತಿದ್ದರೂ ಸುಗಂಧದ್ರವ್ಯದ ವಾಸನೆಯನ್ನು ಗ್ರಹಿಸುತ್ತೇವೆ. ಸಮರ್ಥಿಸಿ.
ಉತ್ತರ: ಅನಿಲಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಗರಿಷ್ಠವಾಗಿರುತ್ತದೆ. ಸುಗಂಧ ದ್ರವ್ಯದ ಕಣಗಳು ಅನಿಲ ಕಣಗಳ ನಡುವೆ ಇರುವ ಖಾಲಿ ಸ್ಥಳಾವಕಾಶಗಳಲ್ಲಿ ಸೇರಿ ಅತ್ಯಂತ ವೇಗವಾಗಿ ಯಾದೃಚ್ಛಿಕವಾಗಿ ಚಲಿಸುತ್ತವೆ. ಆದ್ದರಿಂದ ನಾವು ಹಲವಾರು ಮೀಟರ್ ದೂರದಲ್ಲಿ ಕುಳಿತಿದ್ದರೂ ಸುಗಂಧ ದ್ರವ್ಯದ ವಾಸನೆಯನ್ನು ಗ್ರಹಿಸುತ್ತೇವೆ.
34. ಮರದ ಮೇಜನ್ನು ಘನವಸ್ತು ಎಂದು ಕರೆಯುತ್ತಾರೆ. ಕಾರಣ ಕೊಡಿ.
ಉತ್ತರ: ಮರದ ಮೇಜು ನಿರ್ದಿಷ್ಟ ಆಕಾರ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿವೆ. ಮರದ ಮೇಜಿನಲ್ಲಿ ಕಣಗಳು ಒತ್ತೊತ್ತಾಗಿ ಜೋಡಣೆಯಾಗಿವೆ ಮತ್ತು ಸಂಪೀಡನೆಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಮರದ ಮೇಜನ್ನು ಘನವಸ್ತು ಎಂದು ಕರೆಯುತ್ತಾರೆ.
35. ನಾವು ನಮ್ಮ ಕೈಗಳನ್ನು ಗಾಳಿಯಲ್ಲಿ ಸುಲಭವಾಗಿ ಚಲಿಸಬಹುದು. ಆದರೆ ಘನವಸ್ತುವಾದ ಮರದ ತುಂಡಿನಲ್ಲಿ ಅದೇ ರೀತಿ ಮಾಡಲು ನಮಗೆ ಕರಾಟೆ ಪ್ರವೀಣರ ಅವಶ್ಯಕತೆ ಇದೆ. ಕಾರಣ ಕೊಡಿ.
ಉತ್ತರ: ಅನಿಲ ಕಣಗಳ ನಡುವೆ ಅತ್ಯಂತ ಹೆಚ್ಚು ಖಾಲಿ ಸ್ಥಳಾವಕಾಶಗಳು ಕಂಡು ಬರುತ್ತದೆ. ಅನಿಲಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಹೆಚ್ಚಾಗಿರುತ್ತದೆ ಹಾಗೂ ಕಣಗಳ ನಡುವಿನ ಆಕರ್ಷಣಾ ಬಲ ಕಡಿಮೆ ಇರುತ್ತದೆ. ಆದ್ದರಿಂದ ನಮ್ಮ ಕೈಗಳನ್ನು ಗಾಳಿಯಲ್ಲಿ ಸುಲಭವಾಗಿ ಚಲಿಸಬಹುದು.
ಆದರೆ ಮರದ ತುಂಡು ಘನ ವಸ್ತು. ಘನ ವಸ್ತುಗಳಲ್ಲಿ ಕಣಗಳು ಒತ್ತೊತ್ತಾಗಿ ಜೋಡಣೆ ಆಗಿರುತ್ತವೆ, ಕಣಗಳ ನಡುವಿನ ಅಂತರ ಹಾಗೂ ಚಲನಶಕ್ತಿ ತುಂಬಾ ಕಡಿಮೆ ಇರುತ್ತದೆ ಮತ್ತು ಆಕರ್ಷಣಾ ಬಲ ಹೆಚ್ಚಾಗಿರುತ್ತದೆ. ಆದ್ದರಿಂದ ಮರದ ತುಂಡಿನಲ್ಲಿ ಅದೇ ರೀತಿ ಮಾಡಲು ಕರಾಟೆ ಪ್ರವೀಣರ ಅವಶ್ಯಕತೆ ಇದೆ.

36. ಈಜುಗಾರನು ಈಜುಕೊಳಕ್ಕೆ ನೀರನ್ನು ಸೀಳಿಕೊಂಡು ಧುಮುಕುತ್ತಾನೆ. ಈ ವೀಕ್ಷಣೆಯು ದ್ರವ್ಯದ ಯಾವ ಲಕ್ಷಣವನ್ನು ತೋರಿಸುತ್ತದೆ? ಕಾರಣ ಕೊಡಿ.
ಉತ್ತರ: ನೀರಿನ ಕಣಗಳ ನಡುವಿನ ಆಕರ್ಷಣ ಬಲದ ಲಕ್ಷಣವನ್ನು ತೋರಿಸುತ್ತದೆ. ನೀರಿನ ಕಣಗಳ ನಡುವಿನ ಆಕರ್ಷಣಾ ಬಲ ಕಡಿಮೆ ಇರುವುದರಿಂದ ಈಜುಗಾರ ಈಜುಕೊಳದಲ್ಲಿನ ನೀರನ್ನು ಸುಲಭವಾಗಿ ಸೀಳಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ.
37. ಪಾತ್ರೆಗಳಲ್ಲಿ ಅನಿಲವು ಸಂಪೂರ್ಣವಾಗಿ ತುಂಬಿರುತ್ತದೆ. ಕಾರಣ ಕೊಡಿ.
ಉತ್ತರ: ಅನಿಲ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಹೆಚ್ಚಾಗಿರುತ್ತದೆ ಹಾಗೂ ಕಣಗಳ ನಡುವಿನ ಆಕರ್ಷಣ ಬಲ ಅತ್ಯಂತ ಕಡಿಮೆ ಇರುತ್ತದೆ. ಆದ್ದರಿಂದ ಅನಿಲಗಳಲ್ಲಿ ಕಣಗಳು ಯಾದೃಚ್ಛಿಕವಾಗಿ ಚಲಿಸುತ್ತಿರುವುದರಿಂದ ಇಟ್ಟಿರುವ ಪಾತ್ರೆಗಳಲ್ಲಿ ಅನಿಲವು ಸಂಪೂರ್ಣವಾಗಿ ತುಂಬಿರುತ್ತದೆ.
38. ಕಣಗಳ ನಡುವಿನ ಆಕರ್ಷಣಾಬಲದ ಏರಿಕೆ ಕ್ರಮದಲ್ಲಿ ಈ ಕೆಳಗಿನ ವಸ್ತುಗಳನ್ನು ಜೋಡಿಸಿ - ನೀರು, ಸಕ್ಕರೆ, ಆಕ್ಸಿಜನ್.
ಉತ್ತರ: ಆಕ್ಸಿಜನ್ < ನೀರು < ಸಕ್ಕರೆ (ಅಥವಾ: ಆಕ್ಸಿಜನ್ → ನೀರು → ಸಕ್ಕರೆ).
39. ಘನಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ದ್ರವಗಳು ಕಡಿಮೆ ಸಾಂದ್ರತೆ ಹೊಂದಿವೆ. ಆದರೆ ಮಂಜುಗಡ್ಡೆಯು ನೀರಿನ ಮೇಲೆ ತೇಲುತ್ತದೆ. ಏಕೆ? ಪುಷ್ಟಿಕರಿಸಿ.
ಉತ್ತರ: ನೀರು ಘನೀಕರಿಸಿ ಮಂಜುಗಡ್ಡೆಯಾದಾಗ, ನೀರಿನ ಅಣುಗಳ ನಡುವೆ ದ್ರವರೂಪದಲ್ಲಿ ಇದ್ದದ್ದಕ್ಕಿಂತ ಹೆಚ್ಚಿನ ಖಾಲಿ ಜಾಗ ಸೃಷ್ಟಿಯಾಗುತ್ತದೆ ಮತ್ತು ಅದರ ಗಾತ್ರ ಹೆಚ್ಚಾಗುತ್ತದೆ. ಇದರಿಂದ ಮಂಜುಗಡ್ಡೆಯ ಸಾಂದ್ರತೆಯು ನೀರಿನ ಸಾಂದ್ರತೆಗಿಂತ ಕಡಿಮೆಯಾಗುತ್ತದೆ. ಕಡಿಮೆ ಸಾಂದ್ರತೆ ಇರುವ ವಸ್ತುಗಳು ಹೆಚ್ಚು ಸಾಂದ್ರತೆಯ ದ್ರವದ ಮೇಲೆ ತೇಲುವುದರಿಂದ ಮಂಜುಗಡ್ಡೆಯು ನೀರಿನ ಮೇಲೆ ತೇಲುತ್ತದೆ.
40. ಘನವು ದ್ರವಿಸುವಾಗ, ಅದರ ತಾಪವು ಹಾಗೆಯೇ ಸ್ಥಿರವಾಗಿರುತ್ತದೆ. ಈ ಹೇಳಿಕೆಯನ್ನು ಸೂಕ್ತ ಕಾರಣದೊಂದಿಗೆ ಪುಷ್ಟಿಕರಿಸಿ.
ಉತ್ತರ: ಕಾರಣ ದ್ರವನ ಗುಪ್ತೋಷ್ಣ. ಘನವು ದ್ರವಿಸುವಾಗ, ಕೊಟ್ಟ ಶಾಖವು ಕಣಗಳ ನಡುವಿನ ಆಕರ್ಷಣ ಬಲವನ್ನು ಮೀರಿ ಸ್ಥಿತಿ ಬದಲಾವಣೆ ಆಗಲು ಉಪಯೋಗವಾಗುತ್ತದೆ. ಘನವು ಸಂಪೂರ್ಣವಾಗಿ ಕರಗುವವರೆಗೂ ತಾಪದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದ್ದರಿಂದ ತಾಪವು ಸ್ಥಿರವಾಗಿರುತ್ತದೆ.
41. ಕುದಿಯುವ ನೀರು ಅಥವಾ ಹಬೆ, ಇವುಗಳಲ್ಲಿ ಯಾವುದು ತೀವ್ರವಾದ ಸುಟ್ಟಗಾಯಗಳನ್ನು ಉಂಟು ಮಾಡುತ್ತದೆ? ಏಕೆ? ಕಾರಣ ಕೊಡಿ.
ಉತ್ತರ: ಹಬೆ ತೀವ್ರವಾದ ಸುಟ್ಟಗಾಯಗಳನ್ನು ಉಂಟು ಮಾಡುತ್ತದೆ. ಏಕೆಂದರೆ ಹಬೆಯಲ್ಲಿನ ಕಣಗಳು ಅಧಿಕ ಶಾಖಶಕ್ತಿಯನ್ನು ಆವೀಕರಣ ಗುಪ್ತೋಷ್ಣದ ರೂಪದಲ್ಲಿ ಪಡೆದುಕೊಂಡಿರುತ್ತವೆ.
42. ದ್ರವ್ಯಗಳ ಸ್ಥಿತಿ ಬದಲಾವಣೆಯನ್ನು ನಿರ್ಧರಿಸುವ ಅಂಶಗಳನ್ನು ತಿಳಿಸಿ.
ಉತ್ತರ:
• ತಾಪದ ಬದಲಾವಣೆಯಿಂದ ದ್ರವ್ಯಗಳ ಸ್ಥಿತಿಯನ್ನು ಬದಲಾಯಿಸಬಹುದು.
• ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಮಾಡುವುದರಿಂದ ದ್ರವ್ಯಗಳ ಸ್ಥಿತಿಯನ್ನು ಬದಲಾಯಿಸಬಹುದು.
• ತಾಪದ ಬದಲಾವಣೆಯಿಂದ ದ್ರವ್ಯಗಳ ಸ್ಥಿತಿಯನ್ನು ಬದಲಾಯಿಸಬಹುದು.
• ಒತ್ತಡವನ್ನು ಹೆಚ್ಚು ಅಥವಾ ಕಡಿಮೆ ಮಾಡುವುದರಿಂದ ದ್ರವ್ಯಗಳ ಸ್ಥಿತಿಯನ್ನು ಬದಲಾಯಿಸಬಹುದು.
43. ಗಾಳಿಯ ವೇಗ ಮತ್ತು ದ್ರವದ ಮೇಲ್ಮೈ ವಿಸ್ತೀರ್ಣವು ಆವೀಕರಣದ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
ಉತ್ತರ:
• ದ್ರವದ ಮೇಲ್ಮೈ ವಿಸ್ತೀರ್ಣ ಹೆಚ್ಚಾದಂತೆ, ಆವೀಕರಣದ ದರ ಹೆಚ್ಚಾಗುತ್ತದೆ.
• ಗಾಳಿಯ ವೇಗ ಹೆಚ್ಚಾದಂತೆ, ಆವೀಕರಣದ ದರ ಹೆಚ್ಚಾಗುತ್ತದೆ.
• ದ್ರವದ ಮೇಲ್ಮೈ ವಿಸ್ತೀರ್ಣ ಹೆಚ್ಚಾದಂತೆ, ಆವೀಕರಣದ ದರ ಹೆಚ್ಚಾಗುತ್ತದೆ.
• ಗಾಳಿಯ ವೇಗ ಹೆಚ್ಚಾದಂತೆ, ಆವೀಕರಣದ ದರ ಹೆಚ್ಚಾಗುತ್ತದೆ.
44. ನಾವು ಬಿಸಿಯಾದ ಚಹಾ ಮತ್ತು ಹಾಲನ್ನು ವೇಗವಾಗಿ ಹೀರಲು ತಟ್ಟೆಯಿಂದ ಸಾಧ್ಯವಾಗುತ್ತದೆ, ಆದರೆ ಲೋಟದಿಂದ ಸಾಧ್ಯವಾಗುವುದಿಲ್ಲ ಏಕೆ? ವೈಜ್ಞಾನಿಕ ಕಾರಣ ಕೊಡಿ.
ಉತ್ತರ: ತಟ್ಟೆಯ ಮೇಲ್ಮೈ ವಿಸ್ತೀರ್ಣ ಹೆಚ್ಚು, ಲೋಟದ ಮೇಲ್ಮೈ ವಿಸ್ತೀರ್ಣ ಕಡಿಮೆ. ಮೇಲ್ಮೈ ವಿಸ್ತೀರ್ಣ ಹೆಚ್ಚಾದಾಗ ಬಾಷ್ಟ್ರೀಕರಣ ದರವು ಹೆಚ್ಚಾಗಿ ಚಹಾ ಅಥವಾ ಹಾಲು ಬೇಗ ತಣ್ಣಗಾಗುತ್ತದೆ. ಆದ್ದರಿಂದ ತಟ್ಟೆಯಿಂದ ವೇಗವಾಗಿ ಹೀರಲು ಸಾಧ್ಯವಾಗುತ್ತದೆ.
45. ತಂಪುಕಾರಿಯು ಬಿಸಿಯಾದ ಶುಷ್ಕ ದಿನದಲ್ಲಿ ಹೆಚ್ಚು ತಂಪಾಗಿಸುತ್ತದೆ. ಏಕೆ?
ಉತ್ತರ: ಬಿಸಿಯಾದ ಶುಷ್ಕ ದಿನದಲ್ಲಿ ತಾಪಮಾನವು ಹೆಚ್ಚಾಗಿರುತ್ತದೆ ಮತ್ತು ಆರ್ದ್ರತೆ ಕಡಿಮೆಯಿರುತ್ತದೆ, ಹಾಗಾಗಿ ಬಾಷ್ಟ್ರೀಕರಣ ದರವು ಹೆಚ್ಚಾಗುತ್ತದೆ. ದ್ರವಗಳಲ್ಲಿನ ಕಣಗಳು ಬಾಷ್ಟ್ರೀಕರಣವಾಗುವಾಗ ಕಳೆದುಕೊಂಡ ಶಕ್ತಿಯನ್ನು ಸುತ್ತಮುತ್ತಲಿನ ವಾತಾವರಣದಿಂದ ಮರಳಿ ಪಡೆಯುವುದರಿಂದ ಹೆಚ್ಚು ತಂಪಾಗಿಸುತ್ತದೆ.
46. ಬೇಸಿಗೆಯಲ್ಲಿ ನಾವು ಯಾವ ತರಹದ ಬಟ್ಟೆಗಳನ್ನು ಧರಿಸಬೇಕು? ಏಕೆ? ಕಾರಣ ಕೊಡಿ.
ಉತ್ತರ: ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಏಕೆಂದರೆ ಹತ್ತಿ ಬಟ್ಟೆಗಳಲ್ಲಿರುವ ಸಣ್ಣ ರಂಧ್ರಗಳು ಬೆವರನ್ನು ಹೀರಿಕೊಂಡು, ಸುಲಭವಾಗಿ ಬಾಷ್ಟ್ರೀಕರಣಗೊಳ್ಳಲು ಸಹಾಯ ಮಾಡುತ್ತವೆ. ಇದರಿಂದಾಗಿ ದೇಹಕ್ಕೆ ತಂಪಾದ ಅನುಭವ ಉಂಟಾಗುತ್ತದೆ.
IV. ಮೂರು ಅಂಕದ ಪ್ರಶ್ನೋತ್ತರಗಳು
47. ಈ ಕೆಳಗಿನ ತಾಪಗಳಲ್ಲಿ ನೀರಿನ ಭೌತಿಕ ಸ್ಥಿತಿಯನ್ನು ತಿಳಿಸಿ:
(ಎ) 25°C (ಬಿ) 0°C (ಸಿ) 100°C
(ಎ) 25°C (ಬಿ) 0°C (ಸಿ) 100°C
ಉತ್ತರ:
(ಎ) 25°C → ದ್ರವ ಸ್ಥಿತಿ
(ಬಿ) 0°C → ಘನ ಮತ್ತು ದ್ರವ ಸ್ಥಿತಿ
(ಸಿ) 100°C → ದ್ರವ ಮತ್ತು ಅನಿಲ ಸ್ಥಿತಿ
(ಎ) 25°C → ದ್ರವ ಸ್ಥಿತಿ
(ಬಿ) 0°C → ಘನ ಮತ್ತು ದ್ರವ ಸ್ಥಿತಿ
(ಸಿ) 100°C → ದ್ರವ ಮತ್ತು ಅನಿಲ ಸ್ಥಿತಿ
48. ಈ ಕೆಳಗೆ ಕೊಟ್ಟಿರುವ ತಾಪಗಳನ್ನು ಸೆಲ್ಸಿಯಸ್ ಪದ್ಧತಿಗೆ ಪರಿವರ್ತಿಸಿ:
(ಎ) 300K (ಬಿ) 273K (ಸಿ) 470K
(ಎ) 300K (ಬಿ) 273K (ಸಿ) 470K
ಉತ್ತರ:
(ಎ) 300K → (300K - 273K) = 27°C
(ಬಿ) 273K → (273K - 273K) = 0°C
(ಸಿ) 470K → (470K - 273K) = 197°C
(ಎ) 300K → (300K - 273K) = 27°C
(ಬಿ) 273K → (273K - 273K) = 0°C
(ಸಿ) 470K → (470K - 273K) = 197°C
49. ಈ ಕೆಳಗಿನ ತಾಪಗಳನ್ನು ಕೆಲ್ವಿನ್ ಅಳತೆಗೆ ಪರಿವರ್ತಿಸಿ:
(ಎ) 25°C (ಬಿ) 373°C (ಸಿ) 100°C
(ಎ) 25°C (ಬಿ) 373°C (ಸಿ) 100°C
ಉತ್ತರ:
(ಎ) 25°C → (273 + 25) = 298K
(ಬಿ) 373°C → (273 + 373) = 646K
(ಸಿ) 100°C → (273 + 100) = 373K
(ಎ) 25°C → (273 + 25) = 298K
(ಬಿ) 373°C → (273 + 373) = 646K
(ಸಿ) 100°C → (273 + 100) = 373K
50. ಇವುಗಳನ್ನು ವ್ಯಾಖ್ಯಾನಿಸಿ: (ಎ) ಕಠಿಣತೆ, (ಬಿ) ಸಂಪೀಡ್ಯತೆ, (ಸಿ) ಸಾಂದ್ರತೆ.
ಉತ್ತರ:
• (ಎ) ಕಠಿಣತೆ: ಬಾಹ್ಯ ಬಲವನ್ನು ಪ್ರಯೋಗಿಸಿದಾಗ, ದ್ರವ್ಯವು ತನ್ನ ಆಕಾರದಲ್ಲಿ ಬದಲಾವಣೆಯನ್ನು ವಿರೋಧಿಸುವ ಗುಣ.
• (ಬಿ) ಸಂಪೀಡ್ಯತೆ: ಬಾಹ್ಯ ಬಲಕ್ಕೊಳಪಡಿಸಿದಾಗ ಹೆಚ್ಚಿನ ಗಾತ್ರದ ದ್ರವ್ಯವು ಕಡಿಮೆ ಗಾತ್ರ ಹೊಂದುವ ಕ್ರಿಯೆ.
• (ಸಿ) ಸಾಂದ್ರತೆ: ವಸ್ತುವಿನ ಏಕಮಾನ ಗಾತ್ರ ಮತ್ತು ರಾಶಿಗಳ ಅನುಪಾತ.

51. ಘನ ಸ್ಥಿತಿಯ ಲಕ್ಷಣಗಳನ್ನು ತಿಳಿಸಿ.
ಉತ್ತರ:
1. ಘನ ವಸ್ತುಗಳಲ್ಲಿ ಕಣಗಳು ಒತ್ತೊತ್ತಾಗಿ ಜೋಡಣೆ ಆಗಿವೆ ಮತ್ತು ಕಠಿಣವಾಗಿವೆ.
2. ಘನ ವಸ್ತುಗಳು ನಿರ್ದಿಷ್ಟ ಆಕಾರ, ವಿಶಿಷ್ಟವಾದ ಸುತ್ತಳತೆ ಮತ್ತು ಸ್ಥಿರವಾದ ಗಾತ್ರವನ್ನು ಹೊಂದಿವೆ.
3. ಘನ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಅತ್ಯಂತ ಕಡಿಮೆ ಇದೆ.
4. ಘನ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣಾ ಬಲ ಅತೀ ಹೆಚ್ಚಾಗಿದೆ.
5. ಘನ ವಸ್ತುಗಳಲ್ಲಿ ಸಂಪೀಡನೆಯು ನಗಣ್ಯವಾಗಿದೆ ಮತ್ತು ಬಾಹ್ಯ ಬಲಕ್ಕೊಳಪಡಿಸಿದಾಗ ತಮ್ಮ ಆಕಾರವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ.

52. ದ್ರವ ಸ್ಥಿತಿಯ ಲಕ್ಷಣಗಳನ್ನು ತಿಳಿಸಿ.
ಉತ್ತರ:
1. ದ್ರವ ವಸ್ತುಗಳಲ್ಲಿ ಕಣಗಳು ಸಡಿಲವಾಗಿ ಜೋಡಣೆ ಆಗಿದ್ದು, ಸ್ವತಂತ್ರವಾಗಿ ಚಲಿಸುತ್ತವೆ ಮತ್ತು ಕಣಗಳ ನಡುವೆ ಹೆಚ್ಚು ಅವಕಾಶಗಳು ಕಂಡು ಬರುತ್ತದೆ.
2. ದ್ರವ ವಸ್ತುಗಳಿಗೆ ನಿರ್ದಿಷ್ಟ ಆಕಾರವಿಲ್ಲ. ಆದರೆ, ನಿರ್ದಿಷ್ಟವಾದ ಗಾತ್ರವನ್ನು ಹೊಂದಿವೆ.
3. ದ್ರವ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಮಧ್ಯಂತರವಾಗಿದೆ.
4. ದ್ರವ ವಸ್ತುಗಳಲ್ಲಿ ಕಣಗಳ ನಡುವಿನ ಆಕರ್ಷಣಾ ಬಲ ಮಧ್ಯಂತರವಾಗಿದೆ.
5. ದ್ರವಗಳು ಹರಿಯುತ್ತವೆ ಮತ್ತು ಆಕಾರವನ್ನು ಬದಲಿಸಿಕೊಳ್ಳುತ್ತವೆ.
6. ದ್ರವ ವಸ್ತುಗಳ ವಿಸರಣಾದರವು ಘನ ವಸ್ತುಗಳಿಗಿಂತ ಹೆಚ್ಚಾಗಿದೆ.

53. ಅನಿಲ ಸ್ಥಿತಿಯ ಲಕ್ಷಣಗಳನ್ನು ತಿಳಿಸಿ.
ಉತ್ತರ:
1. ಅನಿಲ ವಸ್ತುಗಳಲ್ಲಿ ಕಣಗಳ ಜೋಡಣೆ ಸ್ವತಂತ್ರವಾಗಿದೆ ಮತ್ತು ಕಣಗಳು ಯಾದೃಚ್ಛಿಕವಾಗಿ ಹೆಚ್ಚು ವೇಗದಲ್ಲಿ ಚಲಿಸುತ್ತಿರುತ್ತವೆ.
2. ಅನಿಲ ವಸ್ತುಗಳಿಗೆ ನಿರ್ದಿಷ್ಟ ಆಕಾರ ಮತ್ತು ಗಾತ್ರ ಇಲ್ಲ.
3. ಅನಿಲ ವಸ್ತುಗಳಲ್ಲಿ ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಅತ್ಯಂತ ಹೆಚ್ಚಾಗಿದೆ.
4. ಅನಿಲ ಕಣಗಳ ನಡುವಿನ ಆಕರ್ಷಣಾ ಬಲ ಅತೀ ಕಡಿಮೆಯಾಗಿದೆ.
5. ಅನಿಲಗಳು ಹೆಚ್ಚು ಸಂಪೀಡನೆ ಹೊಂದುತ್ತವೆ.
6. ಅನಿಲಗಳ ವಿಸರಣಾದರವು ಘನ ಮತ್ತು ದ್ರವ ವಸ್ತುಗಳಿಗಿಂತ ಹೆಚ್ಚಾಗಿದೆ.

54. ಸಿಲಿಂಡರ್‌ನಲ್ಲಿರುವ ಅನಿಲದ ಮೇಲೆ ಒತ್ತಡ ಹೆಚ್ಚಿಸಿದಾಗ ಏನಾಗುತ್ತದೆ? ಚಿತ್ರದಲ್ಲಿ ತೋರಿಸಿರುವ ಪ್ರಕ್ರಿಯೆಯಲ್ಲಿ ದ್ರವೀಕರಿಸಲ್ಪಟ್ಟ ಯಾವುದಾದರೂ ಎರಡು ಅನಿಲಗಳನ್ನು ಹೆಸರಿಸಿ.
ಉತ್ತರ:
• ಅನಿಲದ ತಾಪವನ್ನು ಕಡಿಮೆ ಮಾಡಿ ಮತ್ತು ಹೆಚ್ಚು ಒತ್ತಡ ಹಾಕಿದಾಗ, ಅನಿಲವು ದ್ರವಸ್ಥಿತಿಗೆ ಪರಿವರ್ತನೆಯಾಗುತ್ತದೆ.
• ದ್ರವೀಕರಿಸಲ್ಪಟ್ಟ ಅನಿಲಗಳು: ಎಲ್.ಪಿ.ಜಿ (LPG) ಮತ್ತು ಸಿ.ಎನ್.ಜಿ (CNG).
• ಅನಿಲದ ತಾಪವನ್ನು ಕಡಿಮೆ ಮಾಡಿ ಮತ್ತು ಹೆಚ್ಚು ಒತ್ತಡ ಹಾಕಿದಾಗ, ಅನಿಲವು ದ್ರವಸ್ಥಿತಿಗೆ ಪರಿವರ್ತನೆಯಾಗುತ್ತದೆ.
• ದ್ರವೀಕರಿಸಲ್ಪಟ್ಟ ಅನಿಲಗಳು: ಎಲ್.ಪಿ.ಜಿ (LPG) ಮತ್ತು ಸಿ.ಎನ್.ಜಿ (CNG).
55. ಆವೀಕರಣ, ಘನೀಕರಣ ಮತ್ತು ಸಾಂದ್ರೀಕರಣಗಳಿಗಿರುವ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ.
ಉತ್ತರ:
| ಪ್ರಕ್ರಿಯೆ | ಆವೀಕರಣ | ಘನೀಕರಣ | ಸಾಂದ್ರೀಕರಣ |
|---|---|---|---|
| ವ್ಯಾಖ್ಯಾನ | ದ್ರವ ಸ್ಥಿತಿಯಿಂದ ಅನಿಲ ಸ್ಥಿತಿಗೆ ಬದಲಾಗುವ ಕ್ರಿಯೆ | ದ್ರವ ಸ್ಥಿತಿಯಿಂದ ಘನ ಸ್ಥಿತಿಗೆ ಬದಲಾಗುವ ಕ್ರಿಯೆ | ಅನಿಲ ಸ್ಥಿತಿಯಿಂದ ದ್ರವ ಸ್ಥಿತಿಗೆ ಬದಲಾಗುವ ಕ್ರಿಯೆ |
| ಉದಾಹರಣೆ | ನೀರು ಆವಿಯಾಗುವುದು | ನೀರು ಮಂಜುಗಡ್ಡೆಯಾಗುವುದು | ನೀರಾವಿ ತಂಪಾಗಿ ಮತ್ತೆ ನೀರಾಗುವುದು |
56. ದ್ರವ್ಯದ ಸ್ಥಿತಿಗಳ ಬದಲಾವಣೆಗಳ ಚಿತ್ರದಲ್ಲಿ A, B, C, D, E ಮತ್ತು F ಗಳನ್ನು ಹೆಸರಿಸಿ.
ಉತ್ತರ:
A → ದ್ರವನ
B → ಆವೀಕರಣ
C → ಸಾಂದ್ರೀಕರಣ
D → ಘನೀಕರಣ
E → ಉತ್ಪತನ
F → ನಿಕ್ಷೇಪನ
A → ದ್ರವನ
B → ಆವೀಕರಣ
C → ಸಾಂದ್ರೀಕರಣ
D → ಘನೀಕರಣ
E → ಉತ್ಪತನ
F → ನಿಕ್ಷೇಪನ
V. ನಾಲ್ಕು ಅಂಕದ ಪ್ರಶ್ನೋತ್ತರಗಳು
57. ಕೊಟ್ಟಿರುವ ಚಿತ್ರ A, B ಮತ್ತು C ಗಮನಿಸಿ (A: ಘನ, B: ದ್ರವ, C: ಅನಿಲ). ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ:
i. ಕಣಗಳ ಜೋಡಣೆ ಆಧಾರದ ಮೇಲೆ ಚಿತ್ರ A, B ಮತ್ತು C ಪ್ರತಿನಿಧಿಸುವ ದ್ರವ್ಯದ ಸ್ಥಿತಿಗಳನ್ನು ಹೆಸರಿಸಿ.
ii. ಚಿತ್ರ A, B ಮತ್ತು C ದ್ರವ್ಯಗಳಲ್ಲಿ ಯಾವುದು ಹೆಚ್ಚು ಸಂಪೀಡಣೆ ಹೊಂದುತ್ತದೆ? ಏಕೆ? ಕಾರಣ ಕೊಡಿ.
iii. ಚಿತ್ರ A ಮತ್ತು C ದ್ರವ್ಯದ ಸ್ಥಿತಿಗಳ ಕಣಗಳ ನಡುವಿನ ಆಕರ್ಷಣ ಬಲ ಪರಸ್ಪರ ಹೇಗೆ ಭಿನ್ನವಾಗಿದೆ? ತಿಳಿಸಿ.

• i. ಚಿತ್ರ A → ಘನ, ಚಿತ್ರ B → ದ್ರವ, ಚಿತ್ರ C → ಅನಿಲ.
• ii. ಚಿತ್ರ C (ಅನಿಲ) ಹೆಚ್ಚು ಸಂಪೀಡಣೆ ಹೊಂದುತ್ತದೆ. ಏಕೆಂದರೆ ಅನಿಲಗಳಲ್ಲಿ ಕಣಗಳ ನಡುವೆ ಹೆಚ್ಚಿನ ಖಾಲಿ ಅವಕಾಶಗಳು ಕಂಡು ಬರುತ್ತವೆ. ಬಾಹ್ಯ ಒತ್ತಡವನ್ನು ಪ್ರಯೋಗಿಸಿದಾಗ, ಕಣಗಳು ಹತ್ತಿರ ಬರುತ್ತವೆ ಮತ್ತು ಹೆಚ್ಚು ಸಂಪೀಡನೆ ಹೊಂದುತ್ತದೆ.
• iii. ಚಿತ್ರ A ಘನವಾಗಿದ್ದು, ಘನಗಳಲ್ಲಿ ಕಣಗಳ ನಡುವಿನ ಆಕರ್ಷಣ ಬಲ ಅತ್ಯಂತ ಹೆಚ್ಚಾಗಿದೆ. ಚಿತ್ರ C ಅನಿಲವಾಗಿದ್ದು, ಅನಿಲಗಳಲ್ಲಿ ಕಣಗಳ ನಡುವಿನ ಆಕರ್ಷಣ ಬಲ ಅತೀ ಕಡಿಮೆಯಾಗಿದೆ.

58. ಬಾಷ್ಟ್ರೀಕರಣ ಎಂದರೇನು? ಬಾಷ್ಟ್ರೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪಟ್ಟಿ ಮಾಡಿ.
ಉತ್ತರ:
ದ್ರವವು ಯಾವುದೇ ತಾಪದಲ್ಲಿ ಅದರ ಕುದಿಬಿಂದುವನ್ನು ತಲುಪುವ ಮೊದಲೇ ಆವಿಯಾಗುವ ವಿದ್ಯಮಾನವನ್ನು ಬಾಷ್ಟ್ರೀಕರಣ ಎನ್ನುವರು.
ಪ್ರಭಾವ ಬೀರುವ ಅಂಶಗಳು:
1. ಮೇಲ್ಮೈ ವಿಸ್ತೀರ್ಣ ಹೆಚ್ಚಾದಾಗ ಬಾಷ್ಟ್ರೀಕರಣ ದರವು ಹೆಚ್ಚುತ್ತದೆ.
2. ಆರ್ದ್ರತೆಯ ಪ್ರಮಾಣದ ಇಳಿಕೆಯಿಂದ ಬಾಷ್ಟ್ರೀಕರಣದ ದರವು ಕಡಿಮೆಯಾಗುತ್ತದೆ.
3. ಗಾಳಿಯ ವೇಗದ ಹೆಚ್ಚಳದಿಂದ ಬಾಷ್ಟ್ರೀಕರಣ ದರವು ಹೆಚ್ಚುತ್ತದೆ.
4. ತಾಪಮಾನದ ಹೆಚ್ಚಳದಿಂದ ಬಾಷ್ಟ್ರೀಕರಣ ದರವು ಹೆಚ್ಚುತ್ತದೆ.

59. ಘನ, ದ್ರವ ಮತ್ತು ಅನಿಲಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಉತ್ತರ:
| ಲಕ್ಷಣಗಳು | ಘನ | ದ್ರವ | ಅನಿಲ |
|---|---|---|---|
| 1. ಕಣಗಳ ಜೋಡಣೆ | ಕಣಗಳು ಒತ್ತೊತ್ತಾಗಿ ಜೋಡಣೆ ಆಗಿವೆ. | ಕಣಗಳು ಸಡಿಲವಾಗಿ ಜೋಡಣೆ ಆಗಿವೆ. | ಕಣಗಳು ಸ್ವತಂತ್ರವಾಗಿ ಚಲಿಸುತ್ತವೆ. |
| 2. ಆಕಾರ ಮತ್ತು ಗಾತ್ರ | ನಿರ್ದಿಷ್ಟ ಆಕಾರ, ಸುತ್ತಳತೆ ಮತ್ತು ಸ್ಥಿರ ಗಾತ್ರವನ್ನು ಹೊಂದಿವೆ. | ನಿರ್ದಿಷ್ಟ ಆಕಾರವಿಲ್ಲ; ಆದರೆ, ನಿರ್ದಿಷ್ಟವಾದ ಗಾತ್ರವನ್ನು ಹೊಂದಿವೆ. | ನಿರ್ದಿಷ್ಟ ಆಕಾರ ಮತ್ತು ಗಾತ್ರ ಇಲ್ಲ. |
| 3. ಅಂತರ ಮತ್ತು ಚಲನಶಕ್ತಿ | ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಅತಿ ಕಡಿಮೆಯಾಗಿದೆ. | ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಮಧ್ಯಂತರವಾಗಿದೆ. | ಕಣಗಳ ನಡುವಿನ ಅಂತರ ಮತ್ತು ಕಣಗಳ ಚಲನಶಕ್ತಿ ಅತ್ಯಂತ ಹೆಚ್ಚಾಗಿದೆ. |
| 4. ಆಕರ್ಷಣ ಬಲ | ಕಣಗಳ ನಡುವಿನ ಆಕರ್ಷಣ ಬಲ ಅತೀ ಹೆಚ್ಚಾಗಿದೆ. | ಕಣಗಳ ನಡುವಿನ ಆಕರ್ಷಣ ಬಲ ಮಧ್ಯಂತರವಾಗಿದೆ. | ಕಣಗಳ ನಡುವಿನ ಆಕರ್ಷಣ ಬಲ ಅತೀ ಕಡಿಮೆಯಾಗಿದೆ. |
| 5. ಸಂಪೀಡ್ಯತೆ | ಸಂಪೀಡನೆಯು ನಗಣ್ಯವಾಗಿದೆ. | ಸಂಪೀಡನೆಯು ಮಧ್ಯಂತರವಾಗಿದೆ. | ಸಂಪೀಡನೆಯು ಅತ್ಯಂತ ಹೆಚ್ಚಾಗಿದೆ. |
60. ಅಮೋನಿಯಂ ಕ್ಲೋರೈಡ್ ನ ಉತ್ಪತನದ ಚಿತ್ರ ಬರೆದು, ಈ ಕೆಳಗಿನ ಭಾಗಗಳನ್ನು ಗುರುತಿಸಿ:
(ಎ) ಘನೀಕರಣ ಹೊಂದಿದ ಅಮೋನಿಯಂ ಕ್ಲೋರೈಡ್, (ಬಿ) ಪಿಂಗಾಣಿ ಪಾತ್ರೆ.
(ಎ) ಘನೀಕರಣ ಹೊಂದಿದ ಅಮೋನಿಯಂ ಕ್ಲೋರೈಡ್, (ಬಿ) ಪಿಂಗಾಣಿ ಪಾತ್ರೆ.
ಉತ್ತರ ವಿವರ:
ಚಿತ್ರದಲ್ಲಿ ಗುರುತಿಸಬೇಕಾದ ಪ್ರಮುಖ ಭಾಗಗಳು:
• (ಎ) ಘನೀಕರಣ ಹೊಂದಿದ ಅಮೋನಿಯಂ ಕ್ಲೋರೈಡ್: ತಲೆಕೆಳಗು ಮಾಡಿದ ಆಲಿಕೆಯ ಮೇಲ್ಭಾಗದ ಒಳಮೈ.
• (ಬಿ) ಪಿಂಗಾಣಿ ಪಾತ್ರೆ: ತಳಭಾಗದಲ್ಲಿ ಇರಿಸಲಾದ ಪಿಂಗಾಣಿ ಪಾತ್ರೆ.
(ಜೊತೆಗೆ ಬರ್ನರ್/ಮದ್ಯಸಾರ ದೀಪ, ಆಲಿಕೆಯ ತುದಿಗೆ ಹತ್ತಿಯ ತುಂಡು ಮತ್ತು ತ್ರಿಪಾದಿ ಸ್ಟ್ಯಾಂಡ್ ಇರಬೇಕು)