HOME PAGE
ಮಂಗಳವಾರ, ಅಕ್ಟೋಬರ್ 5, 2021
ಸೋಮವಾರ, ಅಕ್ಟೋಬರ್ 4, 2021
ಪರ್ಯಾಯ ಶೈಕ್ಷಣಿಕ ಯೋಜನೆ ಅಗಷ್ಟ 2021
ಪರ್ಯಾಯ ಶೈಕ್ಷಣಿಕ ಯೋಜನೆ ಅಗಷ್ಟ 2021 | ||
ಭಿರಡಿ ಪ್ರೌಢ ಶಾಲೆ ಭಿರಡಿ | ||
10 ನೇ ತರಗತಿ | 9 ನೇ ತರಗತಿ | 8 ನೇ ತರಗತಿ |
ಕನ್ನಡ | ಕನ್ನಡ | ಕನ್ನಡ |
ಇಂಗ್ಲೀಷ್ | ಇಂಗ್ಲೀಷ್ | ಇಂಗ್ಲೀಷ್ |
ಹಿಂದಿ | ಹಿಂದಿ | ಹಿಂದಿ |
ಗಣಿತ | ಗಣಿತ | ಗಣಿತ |
ವಿಜ್ಞಾನ | ವಿಜ್ಞಾನ | ವಿಜ್ಞಾನ |
ಸಮಾಜ ವಿಜ್ಞಾನ | ಸಮಾಜ ವಿಜ್ಞಾನ | ಸಮಾಜ ವಿಜ್ಞಾನ |
ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ |
ಪರ್ಯಾಯ ಶೈಕ್ಷಣಿಕ ಯೋಜನೆ ಅಕ್ಟೋಬರ್ 2021
ಪರ್ಯಾಯ ಶೈಕ್ಷಣಿಕ ಯೋಜನೆ ಅಕ್ಟೋಬರ್ 2021 | ||
ಭಿರಡಿ ಪ್ರೌಢ ಶಾಲೆ ಭಿರಡಿ | ||
10 ನೇ ತರಗತಿ | 9 ನೇ ತರಗತಿ | 8 ನೇ ತರಗತಿ |
ಕನ್ನಡ | ಕನ್ನಡ | ಕನ್ನಡ |
ಇಂಗ್ಲೀಷ್ | ಇಂಗ್ಲೀಷ್ | ಇಂಗ್ಲೀಷ್ |
ಹಿಂದಿ | ಹಿಂದಿ | ಹಿಂದಿ |
ಗಣಿತ | ಗಣಿತ | ಗಣಿತ |
ವಿಜ್ಞಾನ | ವಿಜ್ಞಾನ | ವಿಜ್ಞಾನ |
ಸಮಾಜ ವಿಜ್ಞಾನ | ಸಮಾಜ ವಿಜ್ಞಾನ | ಸಮಾಜ ವಿಜ್ಞಾನ |
ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ |
ಪರ್ಯಾಯ ಶೈಕ್ಷಣಿಕ ಯೋಜನೆ ಸೆಪ್ಟೆಂಬರ್ 2021
ಪರ್ಯಾಯ ಶೈಕ್ಷಣಿಕ ಯೋಜನೆ ಸೆಪ್ಟೆಂಬರ್ 2021 | ||
ಭಿರಡಿ ಪ್ರೌಢ ಶಾಲೆ ಭಿರಡಿ | ||
10 ನೇ ತರಗತಿ | 9 ನೇ ತರಗತಿ | 8 ನೇ ತರಗತಿ |
ಕನ್ನಡ | ಕನ್ನಡ | ಕನ್ನಡ |
ಇಂಗ್ಲೀಷ್ | ಇಂಗ್ಲೀಷ್ | ಇಂಗ್ಲೀಷ್ |
ಹಿಂದಿ | ಹಿಂದಿ | ಹಿಂದಿ |
ಗಣಿತ | ಗಣಿತ | ಗಣಿತ |
ವಿಜ್ಞಾನ | ವಿಜ್ಞಾನ | ವಿಜ್ಞಾನ |
ಸಮಾಜ ವಿಜ್ಞಾನ | ಸಮಾಜ ವಿಜ್ಞಾನ | ಸಮಾಜ ವಿಜ್ಞಾನ |
ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ | ದೈಹಿಕ ಶಿಕ್ಷಣ |
ಭಾನುವಾರ, ಅಕ್ಟೋಬರ್ 3, 2021
NDA ಪರೀಕ್ಷೆಗೆ ಇದೀಗ ಹುಡುಗಿಯರಿಗೂ ಅವಕಾಶ.!!:
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
NDA ಪರೀಕ್ಷೆಗೆ ಇದೀಗ ಹುಡುಗಿಯರಿಗೂ ಅವಕಾಶ.!!:
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
♣️ National Defense Academy ( NDA ) & Naval Academy ( NA ) ಪ್ರವೇಶಾತಿಗೆ 14-11-2021 ರಂದು ನಡೆಯುವ ಪರೀಕ್ಷೆ ತೆಗೆದುಕೊಳ್ಳಲು ಅವಿವಾಹಿತ ಮಹಿಳೆಯರಿಗೆ ಕೇಂದ್ರ ಲೋಕಸೇವಾ ಆಯೋಗವು ( UPSC ) ಇದೀಗ ಅವಕಾಶ ಕಲ್ಪಿಸಿದೆ.!!
♣️ NDA ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಲು ಸ್ತ್ರೀಯರಿಗೂ ಇದೇ ವರ್ಷ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದ ಬೆನ್ನಲ್ಲೇ UPSC ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.!!
♣️ ಅರ್ಜಿಯನ್ನು ಅಕ್ಟೋಬರ್-8ರ ವರೆಗೂ ಸಲ್ಲಿಸಬಹುದಾಗಿದೆ.!!
🦜🦚🦜🦚🦜🦚🦜🦚🦜🦚
ಮುಖ್ಯಮಂತ್ರಿ ರೈತ ವಿದ್ಯಾನಿಧಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಫೋಟೋ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
POSTMATRIC SCHOLARSHIP:~
♠️♦️♠️♦️♠️♦️♠️♦️♠️♦️♠️
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ನೀಡಲಾಗುವ ವಾರ್ಷಿಕ ಶಿಷ್ಯವೇತನದ ಮಾಹಿತಿ ಇಲ್ಲಿದೆ:
♣️ ಇದು ಕೇವಲ ರೈತರ ಮಕ್ಕಳಿಗಾಗಿ ಮಾತ್ರ.!!
♣️ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ವಿದ್ಯಾರ್ಥಿ ವೇತನ ನೀಡಲಾಗುವುದು.!! ಅದಕ್ಕಾಗಿ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
♣️ PUC / ITI / DIPLOMA:
2,500-3,000/-
♣️ BA / B.SC / B.Com / Other Degree:
5,000-5,500/-
♣️ LLB / B.Pharama / Nursing / Paramedical:
7,500-8,000/-
♣️ BE / B.Tech / MBBS:
10,000-11,000/-
♣️ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻
ಶನಿವಾರ, ಸೆಪ್ಟೆಂಬರ್ 11, 2021
1. ಸುಶ್ರುತ
1. ಸುಶ್ರುತ
ವೈದಿಕಯಷಿ ವಿಶ್ವಾಮಿತ್ರನ ವಂಶಸ್ಸಕ್ರಿ.ಪೂ. 600 ವರ್ಷಕ್ಕಿಂತ ಪೂರ್ವದಲ್ಲಿ ಜನಿಸಿದ್ದರು. ಅವರು ಪ್ರಾಚೀನ ಭಾರತದ ಒಬ್ಬ ಪ್ರಸಿದ್ದ ಶಲ್ಯ ಚಿಕಿತ್ಸಕರಿದ್ದು, ಅವರು ವೈದ್ಯರ ಹಾಗೂ ಶಲ್ಯ ಚಿಕಿತ್ಸೆಯ ಜ್ಞಾನವನ್ನು ವಾರಣಾಸಿಯ ದಿವೋದಾಸ ಧನ್ವಂತರಿಯ ಆಶ್ರಮದಿಂದ ಪಡೆದರು.
ಸುಶ್ರುತರು ಶಲ್ಯ ಚಿಕಿತ್ಸೆಯೊಂದಿಗೆ ವೈದ್ಯಕೀಯ ಆನೇಕ ರಂಗಗಳಲ್ಲಿ ಪಾರಂಗತರಿದ್ದರು. ವಿಶ್ವದ ಚಿಕಿತ್ಸಾ ಇತಿಹಾಸದಲ್ಲಿ ಸುತ್ತುತರಿಗೆ ಶಲ್ಯ ಚಿಕಿತ್ಸೆಯ ಜನಕರೆಂದು ಮನ್ನಿಸಲಾಗುತ್ತದೆ. ಶಲ್ಯದ ಅರ್ಥ ಶರೀರದ ಪೀಡೆ ಹಾಗೂ ಆ ಪೀಡೆಯನ್ನು ಉಪಕರಣಗಳ ಪ್ರಯೋಗದಿಂದ ದೂರ ಮಾಡುವ ಕ್ರಿಯೆಗೆ ಶಲ್ಯ ಚಿಕಿತ್ಸಾ ಅಥವಾ ಸರ್ಜರಿ ಎಂದು ಹೆಸರಿಡಲಾಗಿದೆ.
ಸುತ್ತುತರು ಮೊದಲಿಗೆ ಚಿಕಿತ್ಸಕರು, ಅವರು ಚಿಕಿತ್ಸಾದ ಪ್ರಚಾರ ಮಾಡಿದರು, ಅವರು ಶಲ್ಯ ಚಿಕಿತ್ಸಕರನ್ನು ಅವರೇಶನದ ಪೂರ್ವ ಉಪಕರಣಗಳನ್ನು ಬೆಂಕಿಯಲ್ಲಿ ಕಾಸುವ ಸಲಹೆ ನೀಡಿದರು. ಅದರಿಂದಾಗಿ ಕೀಟಾಣುಗಳು ಸತ್ತು ಹೋಗುವವು, ಅವರ ಸಲಹೆ ಯಿಂದ ರೋಗಿಗೆ ಶಲ್ಯ ಚಿಕಿತ್ಸೆಯ ಪೂರ್ವ ಮದಿರಾಪಾನ ಮಾಡಿಸಬೇಕೆಂಬುದು ಅದು ಎನ್‌ಸೈಸಿಯಾ ಪರಿಣಾಮವ,
ಒಂದು ಬಾರಿ ಒಬ್ಬ ಅಪರಿಚಿತನು ದುರ್ಘಟನೆಯಲ್ಲಿ ಮೂಗು ಒಡೆದು ಕೊಂಡು ಸುಶ್ರುತರಲ್ಲಿಗೆ ಬಂದನು. ಸುಶ್ರುತರು ಅವನ ಬಾಯಿಯನ್ನು ಔಷಧದ ನೀರಿನಿಂದ ತೊಳೆದರು. ತಮ್ಮ ಉಪಕರಣಗಳನ್ನು ಕಾಸಿದರು. ನಂತರ ಅವನ ಗಲ್ಲದಿಂದ ತುಸು ಮಾಂಸವನ್ನು ಕೊಯ್ದು ತೆಗೆದು ಅವನ ಮೂಗಿನ ಮೇಲೆ ಔಷಧದಿಂದ ಹಚ್ಚಿ ಆಕಾರ ಮಾಡಿದರು. ಮೂಗಿನ ಮೇಲೆ ದಾರಾಅರಿಷಿಣದ ರಸ ಹಚ್ಚಿ ಅದನ್ನು ಅರಳೆ ಯಿಂದ ಮುಚ್ಚಿ ಕಟ್ಟಿದರು. ನಂತರ ಅವನಿಗೆ ಔಷಧಗಳ ಸೂಜಿಪಟ್ಟ ನೀಡಿದರು. ಅದನ್ನು ಪ್ರತಿನಿತ್ಯ ಸೇವಿಸಬೇಕೆಂದು ಸಲಹೆ ನೀಡಿದರು.
ಈ ಪ್ರಕಾರ ಸುಶ್ರುತರು ಪೂರ್ವದಲ್ಲಿ ಅವರು ಏನೆಲ್ಲ ಮಾಡಿದರೋ ಅವೆಲ್ಲವೂ ಇಂದಿನ ಯುಗದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಎನ್ನುವ ಹೆಸರಿನಲ್ಲಿ ಪ್ರಚಲಿತಕ್ಕೆ 67
ಬಂದಿದೆ. ಸುಶ್ರುತರು ಶಲ್ಯ ಚಿಕಿತ್ಸೆಯಲ್ಲಿ ಅದ್ಭುತ ಕೌಶಲ್ಯವನ್ನು ಪಡೆದಿದ್ದರು. ಅವರು ಮುಂದೆ ಎಲುವು ಜೋಡಿಸುವುದರಲ್ಲಿ ಹಾಗೂ ಮೋತಿಬಿಂದು ಚಿಕಿತ್ಸೆಯಲ್ಲಿ ವಿಶೇಷ ಪರಿಣಿತರಿದ್ದರು. ಮನುಷ್ಯನ ಶರೀರದಲ್ಲಿ ಇರುವ ಕೀಯೆಗಳ ವರ್ಗಿಕರಣ ರಕ್ತ ಹೀರುವ ಜಿಗಳಿ ಹಾಗೂ ಪಶುಗಳ ಒಂದು ಅಸ್ಪಷ್ಟ ವರ್ಗಿಕರಣವನ್ನು ಸುಶ್ರುತ ಮಾಡಿದ್ದರು.
ಸುತ್ತುತರು ಬೇರೆ ಬೇರೆ ಋತುಗಳು ಹಾಗೂ ಅವುಗಳ ಮುಖದಿಂದ ಮನುಷ್ಯರು, ಜಯಗಳು ಮತ್ತು ವನಸ್ಪತಿಗಳ ಮೇಲೆ ಆಗುವ ಪ್ರಭಾವದ ಮೇಲೆ ವೈಜ್ಞಾನಿಕ ವಿಚಾರವನ್ನು ತಿಳಿಸಿದರು.
ಸುಶ್ರುತದಿಂದ ಬರೆದ ಪುಸ್ತಕ 'ಸುಶ್ರುತ ಶಲ್ಯ ತಂತ್ರ' ಅಥವಾ ಸುಶ್ರುತ ಸಂಹಿತಾ ಅತ್ಯಧಿಕ ಮಹತ್ವದ್ದೆಂದು ಮನ್ನಿಸಲಾಗುತ್ತದೆ, ಅವರು ಈ ಸಂಹಿತೆಯಲ್ಲಿ ಸೀಳಿ ಕೊಯ್ಯುವ ಪದ್ಧತಿ ಹಾಗೂ ಬೇರೆ ಬೇರೆ ಉಪಕರಣಗಳ ವಿಷಯವನ್ನು ಬರೆದಿದ್ದಾರೆ. ಅವರು ತಮ್ಮ ಉಪಕರಣಗಳ ಹೆಸರುಗಳನ್ನು ಪಕ್ಷಿಗಳ ಹಾಗೂ ಪಶುಗಳ ಹೆಸರಿನಲ್ಲಿ ಇಟ್ಟು ಆ ಮುಖದಿಂದ ತಮ್ಮ ಉಪಕರಣವನ್ನು ತಿಳಿದುಕೊಳ್ಳುತ್ತಿದ್ದರು. ಅವುಗಳಲ್ಲಿ ಕೆಲವು ಹೆಸರುಗಳು ಇಂದಿಗೂ ಪ್ರಸಿದ್ಧವಾಗಿವೆ.
ಸುಶ್ರುತ ಸಂಹಿತಾ ಸಂಸ್ಕೃತ ಭಾಷೆಯಲ್ಲಿದೆ. ಇದರ 120 ಅಧ್ಯಾಯಗಳಲ್ಲಿ ಶಲ್ಯ ಚಿಕಿತ್ಸಾ ಹಾಗೂ ಅನ್ಯ ಅಧ್ಯಾಯಗಳಲ್ಲಿ ಶರೀರ ಚಿಕಿತ್ಸೆಯ ಬಗೆಗೆ ಬರೆಯಲಾಗಿದೆ. ಇದಲ್ಲದೆ ಸುಶ್ರುತ ಸಂಹಿತೆಯಲ್ಲಿ ಆಯುರ್ವೇದದ ಬೇರೆ ಬೇರೆ ಪರೀಕ್ಷೆ, ನೇತ್ರ ತಲೆನೋವು ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊದಲಾದ ವಿಷಯಗಳ ಬಗೆಗೂ ತಿಳುವಳಿಕೆ ನೀಡಲಾಗಿದೆ.
ಎಂಟನೇ ಶತಾಬಿಯಲ್ಲಿ ಸುರುತ ಸಂಹಿತಾ ಅರಬ್ಬಿ ಭಾಷೆಯಲ್ಲಿ ಅನುವಾದ ವಾಯಿತು. ಅನುವಾದಿತ ಪುಸ್ತಕಗಳ ಹೆಸರುಗಳು - ಕಿತಾಬಶ ಶೂನ ಎ ಹಿಂದಿ ಮತ್ತು ಕಿಶಾಚಿ ಸುಸುರದು.
ತಮ್ಮ ಪುಸ್ತಕದಲ್ಲಿ ಸುತ್ತುತರು - ಮಾನವ ಶರೀರದ ಪೂರ್ಣಜ್ಞಾನ ಪಡೆಯಲು ಶವ ಪರೀಕ್ಷಣ ಅಥವಾ ಶವವನ್ನು ಕೊಯ್ಯುವದು, ಸೀಳುವದು ಅತೀ ಅವಶ್ಯಕವೆಂದು ಹೇಳಿದ್ದಾರೆ.
ಸುಶ್ರುತರು -ಒಬ್ಬ ಸಫಲ ಚಿಕಿತ್ಸಕನಿಗಾಗಿ ಪುಸ್ತಕದ ಜ್ಞಾನವಲ್ಲದೆ ಪ್ರಯೋಗಾತ್ಮಕ ಹಾಗೂ ವ್ಯವಹಾರಿಕ ಅಭ್ಯಾಸವೂ ಅವಶ್ಯಕವೆಂದಿದ್ದಾರ.
ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ
ಶನಿವಾರ, ಸೆಪ್ಟೆಂಬರ್ 4, 2021
ಶಿಕ್ಷಕರ ದಿನಾಚರಣೆಯ ಕುರಿತು
ಗುರು ಬ್ರಹ್ಮ ಗುರು ವಿಷ್ಣು
ಗುರು ದೆವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಸ್ನೇಹಿತರೆ, ನನ್ನ ಎಲ್ಲ ಶಿಕ್ಷಕ ಮಿತ್ರರೇ, ವಿದ್ಯಾರ್ಥಿ ಮಿತ್ರರೇ,ಹಿರಿಯರೇ ತಮ್ಮಗೆಲ್ಲರಿಗೂ ತಿಳಿದಂತೆ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರಿಗೆ ಶಿಕ್ಷಕರ ಬಗ್ಗೆ ತುಂಬಾ ಗೌರವ ಇತ್ತು. ಅವರು ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದ್ದರು.
ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು. ಆದ್ದರಿಂದ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೂ ಮೂಡಿಸಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ನೇ ತಾರೀಖನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ.
ಇನ್ನೂ ಮಹತ್ವದ ವಿಷಯ ಎಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಹಾಗೂ ದೇಶದ ಮೊದಲ ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದವರು
ಸ್ನೇಹಿತರೆ ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮಹತ್ವವಾದದ್ದು.
ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೆಂಬಲವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ತುಂಬುತ್ತಾರೆ. ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಶಿಕ್ಷಕರು. ಅಂತಹ ಉತ್ತಮ ಶಿಕ್ಷಕ ವೃತ್ತಿಯನ್ನು ನಾವೆಲ್ಲರೂ ಪಡೆದಿದ್ದೇವೆ.
ಸ್ನೇಹಿತರೇ 2020 ರ ಮಾರ್ಚ್‌ನಿಂದಲೂ ಸಹ ಕೊರೊನಾ ಎಂಬ ಮಹಾಮಾರಿ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದೆ. ಇಂತಹ ಪರಿಸ್ಥಿತಿಯಲ್ಲೂ ಸಹ ನಮ್ಮ ಶಿಕ್ಷಕರು ತಮ್ಮ ಪ್ರಾಣದ ಹಂಗು ತೊರೆದು ಕಲಿಸಲು ಆಸಕ್ತಿ ತೋರಿದ್ದಾರೆ. ಇಂತಹ ಶಿಕ್ಷಕರನ್ನು ಪಡೆದ ನಾವೇ ಭಾಗ್ಯವಂತರು.
"The good teacher explains. The superior teacher demonstrates. The great teacher inspires”.
“What the teacher is, is more important than what he teaches”
“Education is the most powerful weapon which you can use to change the world”
“ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”
ಶಿಕ್ಷಕ' ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ಪದ. ಬೆಳಗಿಸುವ ಪದ.
" ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯಗಳೊಂದಿಗೆ ಮತ್ತು ಅನುಭವಗಳೊಂದಿಗೆ ತಿಳಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ." ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಅವರ ಮಾತನ್ನು ಸ್ಮರಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಮತ್ತೊಮ್ಮೆ ಭಾರತಾಂಬೆಯ ಮಡಿಲಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ..... ನನ್ನ ಮಾತನ್ನು ಮುಗಿಸುತ್ತಿದ್ದೇನೆ.
ಜೈ ಹಿಂದ್, ಜೈ ಭಾರತಾಂಬೆ, ವಂದೇ ಮಾತರಂ.