HOME PAGE
ಶನಿವಾರ, ಜೂನ್ 5, 2021
ಶುಕ್ರವಾರ, ಜೂನ್ 4, 2021
ಘಟಕವಾರು ವಿಜ್ಞಾನ ಬಹು ಆಯ್ಕೆ ಪ್ರಶ್ನೆ ಗಳಿಗೆ ನನ್ನ ಬ್ಲಾಗ್ ಗೆ ಭೇಟಿ ನೀಡಿ
ಈ ಕೆಳಗಿನ ಆಯಾ ಅಧ್ಯಾಯಗಳ ಮುಂದೆ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಆಯಾ ಕ್ವಿಜ್ ನ PDF ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ...
SI | ಅಧ್ಯಾಯಗಳ ಹೆಸರು | LINK |
1 | ರಾಸಾಯನಿಕ ಕ್ರಿಯೆಗಳು & ಸಮೀಕರಣಗಳು | |
2 | ಆಮ್ಲಗಳು ಪ್ರತ್ಯಾಮ್ಲಗಳು & ಲವಣಗಳು | |
3 | ಲೋಹಗಳು & ಅಲೋಹಗಳು | |
4 | ಕಾರ್ಬನ್ & ಅದರ ಸಂಯುಕ್ತಗಳು | |
5 | ಧಾತುಗಳ ಆವರ್ತನೀಯ ವರ್ಗೀಕರಣ | |
6 | ಜೀವ ಕ್ರಿಯೆಗಳು | |
7 | ನಿಯಂತ್ರಣ & ಸಹಭಾಗಿತ್ವ | |
8 | ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ | |
9 | ಅನುವಂಶೀಯತೆ & ಜೀವವಿಕಾಸ | |
10 | ಬೆಳಕು ಪ್ರತಿಫಲನ & ವಕ್ರೀಭವನ | |
11 | ಮಾನವನ ಕಣ್ಣು & ವರ್ಣಮಯ ಜಗತ್ತು | |
12 | ವಿದ್ಯುಚ್ಛಕ್ತಿ | |
13 | ವಿದ್ಯುತ್ ಕಾಂತೀಯ ಪರಿಣಾಮಗಳು | |
14 | ಶಕ್ತಿಯ ಆಕರಗಳು | |
15 | ನಮ್ಮ ಪರಿಸರ | |
16 | ನೈಸರ್ಗಿಕ ಸಂಪನ್ಮಲಗಳ ಸುಸ್ಥಿರ ನಿರ್ವಹಣೆ | |
| ಎಲ್ಲಾ ಅಧ್ಯಾಯಗಳ PDF ಒಂದೇ File ನಲ್ಲಿ |
ವಿಶ್ವ ಪರಿಸರ ದಿನ
ಪರಿಚಯ:
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ವಿಶ್ವದಾದ್ಯಂತ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿತು. 1974 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಆಚರಣೆಯನ್ನು ನಿಯಂತ್ರಿಸುವ ಮುಖ್ಯ ಸಂಸ್ಥೆ ವಿಶ್ವಸಂಸ್ಥೆ.
ವಿಶ್ವ ಪರಿಸರ ದಿನವನ್ನು ಏಕೆ ಆಚರಿಸಲಾಗುತ್ತದೆ?:
ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ.
ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯೊಂದಿಗೆ ಬಂದಿತು.
ಭಾಗವಹಿಸುವುದು ಹೇಗೆ?
ವಿಶ್ವ ಪರಿಸರ ದಿನಾಚರಣೆಯಲ್ಲಿ ನೀವು ಭಾಗವಹಿಸಲು ಹಲವಾರು ಮಾರ್ಗಗಳಿವೆ.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಿ-ನಿಮ್ಮ ಅಭಿಪ್ರಾಯವನ್ನು ನೀಡಿ ಮತ್ತು ಇತರರಿಗೆ ಸ್ಫೂರ್ತಿ ನೀಡಿ.
ನೀರು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಬಗ್ಗೆ ನೀವೇ ಬದ್ಧರಾಗಿರಿ.
ಕಡಿಮೆ ವಿದ್ಯುತ್ ಬಳಸಿ ಮತ್ತು ಪಳೆಯುಳಿಕೆ ಇಂಧನ, ಪೆಟ್ರೋಲಿಯಂ ಇತ್ಯಾದಿಗಳನ್ನು ಸುಡುವುದನ್ನು ತಪ್ಪಿಸಿ.
ನಿಮ್ಮ ಹಿತ್ತಲಿನಲ್ಲಿ ಅಥವಾ ನೆರೆಹೊರೆಯಲ್ಲಿ ಹೊಸ ಮರವನ್ನು ನೆಡುವ ಮೂಲಕ ನಿಮ್ಮ ಕಾಳಜಿಯನ್ನು ತೋರಿಸಿ.
ಉಪಸಂಹಾರ:
ಮಾನವನ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗದಂತೆ ಮಾಡಲು ವಿಶ್ವ ಪರಿಸರ ದಿನವನ್ನು ಜಗತ್ತಿನ ಎಲ್ಲ ದೇಶಗಳು ಆಚರಿಸಬೇಕು.